
3rd December 2024
ಯಳಂದೂರು ಡಿ. 3
ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ ) ವತಿಯಿಂದ ಮತ್ತು ಸರ್ಕಾರಿ ಕಟ್ಟೆ ಕೆರೆ ಅಭಿವೃದ್ಧಿ ಸಮಿತಿ ದಾಸನ ಹುಂಡಿ ಇವರ ಸಯುಕ್ತ ಆಶ್ರಯದಲ್ಲಿ"ನಮ್ಮೂರು ನಮ್ಮ ಕೆರೆ" ಕಾರ್ಯಕ್ರಮದಡಿಯಲ್ಲಿ ದಾಸನಹುಂಡಿ ಸರ್ಕಾರಿಕಟ್ಟೆ ಕೆರೆ ಪುನಶ್ಚೇತನ ಗೊಳಿಸಲಾದ "757"ನೇ ಕೆರೆಯ ನಾಮಪಲಕ ಅನಾವರಣ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಮೈಸೂರು ಪ್ರಾದೇಶಿಕ ನಿರ್ದೇಶಕರಾದ ಬಿ ಜಯರಾಮ ನೆಲ್ಲಿತ್ತಾಯ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.
ಬಳಿಕ ಮಾತನಾಡಿದ ಅವರು ಸಂಸ್ಥೆ ವತಿಯಿಂದ ಮಾಡುತ್ತಿರುವ ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಹೊಂದುವ ದೃಷ್ಟಿಯಿಂದ ದಾಸನ ಹುಂಡಿ ಗ್ರಾಮದಲ್ಲಿ ಕೆರೆ ಹಸ್ತಾಂತರಗೊಂಡಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬ ಊರಿನ ನಾಗರಿಕರು ಪಡೆದು ಕೊಳ್ಳಬೇಕು ಎಂದರು. ಈ ಕೆರೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಅನುದಾನ 2.66 ಲಕ್ಷ ಮಂಜೂರಾತಿ ನೀಡಿದ್ದು ಇದರಲ್ಲಿ 1.57 ಲಕ್ಷ ಖರ್ಚಾಗಿದ್ದು ಹ ಗ್ರಾಮಸ್ಥರು ಪಾಲು 0.75 ಲಕ್ಷ ಆಗಿದ್ದು ಒಟ್ಟು 2.32 ಖರ್ಚಾಗಿದ್ದು ಕೆರೆಯು ಬಹಳ ಸುಂದರವಾಗಿ ಈ ಕೆರೆಯನ್ನು ರೂಪಿಸಲಾಗಿದೆ. ಈ ಕೆರೆಯಲ್ಲಿ ಇರುವಂತಹ ಜೀವಿಗಳು ಕೆರೆ ಜೀವನಾಡಿಯಾಗಿದೆ. ಕೆರೆಯಿಂದ ಜನರು ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ಮತ್ತು ಕೆರೆಯ ಸುತ್ತ-ಮುತ್ತಲಿನ ಕೃಷಿ ಜಮೀನುಗಳಿಗೆ ಅಂತರ್ಜಾಲ ಇವೆಲ್ಲವು ಜೀವಂತವಾಗಿ ಇರಬೇಕಾದರೆ ನಾವು ನಮ್ಮ ಊರಿನಲ್ಲಿ ಇರುವ ನಮ್ಮಕೆರೆಗಳನ್ನು ನಾವು ಸುಚಿಯಾಗಿಟ್ಟುಕೊಂಡು ಕೆರೆಯನ್ನು ನಾವುಕಾಪಾಡಿದಾಗ ಮಾತ್ರ ಕೆರೆಯನ್ನು ನಮ್ಮ ಮುಂದಿನಪೀಳಿಗೆಗೂರಕ್ಷಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು
ಈ ಕೆರೆ ಕಾಮಗಾರಿಯಿಂದ ನೀರು ತುಂಬಿದ ನಂತರ ಸುತ್ತಮುತ್ತಲಿನ 18 ಬೋರ್ವೆಲ್ ಗಳು ರಿಚಾರ್ಜ್ ಆಗುತ್ತದೆ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿನ ಸೌಕರ್ಯ ಸಿಗುತ್ತದೆ ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಬೇಕೆಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೆರೆ ಸಮಿತಿ ಅಧ್ಯಕ್ಷರಾದ ಬಾಬು ಡಿ ಸಿ ಮಾತನಾಡಿ ಧರ್ಮಸ್ಥಳ ಯೋಜನೆ ಮಾಡುತ್ತಿರುವ ಹತ್ತು ಹಲವಾರು ಕಾರ್ಯಕ್ರಮಗಳು ಜನಪರ ಕಾರ್ಯಕ್ರಮಗಳು ಈ ಕೆರೆ ಕಾಮಗಾರಿಯಿಂದ ನಮ್ಮ ಗ್ರಾಮದ ಎಲ್ಲ ಸದಸ್ಯರು ನಾವು ಗ್ರಾಮಾಭಿವೃದ್ಧಿ ಯೋಜನೆಯೂ ಗ್ರಾಮೀಣ ಅಭಿವೃದ್ಧಿ ಮಾಡುವ ಸಲುವಾಗಿ ನೀಡುತ್ತಿರುವ ಕೊಡುಗೆಗಳ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು ನಾವು ಎಂದಿಗೂ ಧರ್ಮಸ್ಥಳ ಸಂಸ್ಥೆಗೆ ಸದಾ ಕಾಲ ಚಿರಋಣಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿಕಟ್ಟೆ ಕೆರೆ ಸಮಿತಿ ಅಧ್ಯಕ್ಷರು ಉಪಾಧ್ಯಕ್ಷರುಹಾಗೂ ಸಮಿತಿಯ ಎಲ್ಲ ಸದಸ್ಯರಿಂದ ಗ್ರಾಮಪಂಚಾಯಿತಿಯವರಿಗೆ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಆನಂದ ಗೌಡ ,ಮಾನ್ಯ ಮೈಸೂರು ಪ್ರಾದೇಶಿಕ ಕಛೇರಿಯ ಕೆರೆ ಅಭಿಯಂತರರಾದ ಪುಷ್ಪರಾಜ್ , ಜ್ಞಾನವಿಕಾಸ ಯೋಜನಾಧಿಕಾರಿಯವರಾದ ಶ್ರೀಮತಿ ಮೂಕಾಂಬಿಕಾ ವಲಯ ಮೇಲ್ವಿಚಾರಕರಾದ ಪ್ರಕಾಶ್ ಮೂರ್ತಿ, ಕೃಷಿ ಮೇಲ್ವಿಚಾರಕರ ಶಿವಕುಮಾರ್ ಮತ್ತು ಕೆರೆ ಅಭಿವೃದ್ಧಿ ಸಮಿತಿ, ಸೇವಾ ಪ್ರತಿನಿಧಿಗಳು ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
undefined